ಗ್ವಾನೀನಿನಿಂದ ಉತ್ಪಾದಿಸಿದ ಒಂದು ಜೈವಿಕ ವಸ್ತು. ಇದರ ರಾಸಾಯನಿಕ ರಚನೆ ಊಓ:ಅ(ಓಊ2)2. ಆರ್ಜಿನೀನ್ ಎಂಬ ಅಮೈನೋ ಆಮ್ಲವನ್ನು ಪೊಟಾಸಿಯಮ್ ಪಮಾರ್ಯ್ಂಗನೇಟಿನಿಂದ ಉತ್ಕರ್ಷಿಸಿದಾಗ ಕೂಡ ಗ್ವಾನಿಡೀನ್ ದೊರಕುತ್ತದೆ. ಸಾಮಾನ್ಯವಾಗಿ ಅಮೋನಿಯಮ್ ಥಯೊಸಯನೇಟನ್ನು 180-190oಅ. ಉಷ್ಣತೆಗೆ ಒಳಪಡಿಸಿ ಗ್ವಾನಿಡೀನನ್ನು ಪ್ರಯೋಗಾಲಯದಲ್ಲಿ ಪಡೆಯಬಹುದು. ಇದೊಂದು ವರ್ಣರಹಿತ ಹರಳು. ವಾತಾವರಣದಿಂದ ದ್ರವಾಂಶವನ್ನು ಹೀರಿ ದ್ರವಿಸುತ್ತದೆ. ಪ್ರತ್ಯಾಮ್ಲೀಯ ಸ್ವಭಾವದ್ದಾದ್ದರಿಂದ ವಾತಾವರಣದಿಂದ ಕಾರ್ಬನ್ ಡೈ ಆಕ್ಸೈಡನ್ನು ಕೂಡ ಹೀರಿಕೊಳ್ಳಬಲ್ಲದು. ಬೋರಿಕ್ ಮತ್ತು ಸಿಲಿಸಿಕ್ ಆಮ್ಲ್ಲಗಳೊಡನೆ ಸೇರಿ ಸ್ಥಿರಲವಣಗಳನ್ನು ಕೊಡುತ್ತದೆ. ನೈಸರ್ಗಿಕವಾಗಿ ಹಲವಾರು ಸಸ್ಯಗಳಲ್ಲೂ ಪ್ರಾಣಿಗಳಲ್ಲೂ ಗ್ವಾನಿಡೀನ್ ಅಲ್ಪ ಗಾತ್ರದಲ್ಲಿರುವುದು ಕಂಡುಬಂದಿದೆ. ಗ್ವಾನಿಡೀನಿನಿಂದ ಉತ್ಪನ್ನವಾಗಬಲ್ಲ ವಸ್ತುಗಳಲ್ಲಿ ನೈಟ್ರೊಗ್ವಾನಿಡೀನ್ ಪ್ರಮುಖವಾದದ್ದು. ಅಮೈನೋ ಗ್ವಾನಿಡೀನ್ ಅನೇಕ ರೀತಿಯ ಬಣ್ಣಗಳ ಉತ್ಪಾದನೆಯಲ್ಲಿ ಉಪಯೋಗವಾಗುತ್ತದೆ. ಡೆಕಮಿಥಿಲಿನ್ ಗ್ವಾನಿಡೀನ್ ಟ್ರಿಪಾನೋಸೋಮದಿಂದ ಬರುವ ನಿದ್ರಾರೋಗಕ್ಕೆ ಮದ್ದು. ಕ್ಲೋರೊಗ್ವಾನಿಡೀನ್ ಹೈಡ್ರೊಕ್ಲೋರೈಡನ್ನು ಮಲೇರಿಯ ರೋಗಚಿಕಿತ್ಸೆಗೆ ಬಳಸಲಾಗುತ್ತದೆ. ಸಲ್ಫಗ್ವಾನಿಡೀನ್ ನೀರಿನಲ್ಲಿ ವಿಲೀನವಾಗದ ಒಂದು ಮದ್ದು. ಇದನ್ನು ಸೇವಿಸಿದಾಗ ಕರುಳಿನಿಂದ ರಕ್ತಗತವಾಗದೆ ಬಹುಕಾಲಿಕವಾಗಿ ಅಲ್ಲೇ ಇರುತ್ತದೆ. ಆದ್ದರಿಂದ ರೋಗಾಣುಕೃತ ಆಮಶಂಕೆಗೆ (ಬ್ಯಾಸಿಲರಿ ಡಿಸೆಂಟರಿ) ಇದು ತಕ್ಕ ಮದ್ದು. ಗ್ವಾನಿಡೀನಿನ ಸಂಬಂಧವಾದ ಎರಡು ಅಮೈನೋ ಆಮ್ಲ್ಲಗಳು ದೇಹಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮೊದಲನೆಯದು ಮೇಲೆ ಹೇಳಿದ ಆರ್ಜಿನೀನ್ (1-ಅಮೈನೋ-4ಗ್ವಾನಿಡೋ ವೆಲೇರಿಕ್ ಆಮ್ಲ). ಇದು ಪ್ರೋಟೀನುಗಳಲ್ಲಿ ಸಾಮಾನ್ಯವಾಗಿ ಇರುವ ಒಂದು ಘಟಕವಸ್ತು. ಸಸ್ತನಿಗಳ ದೇಹದಲ್ಲಿ ಪ್ರೋಟೀನುಗಳ ಚಯಾಪಚಯ ಕ್ರಿಯೆಯಿಂದ ನಿರಂತರವೂ ಉತ್ಪತ್ತಿಯಾಗುತ್ತಿರುವ ಅಮೋನಿಯ ದೇಹದಲ್ಲಿ ಇರುವ ಆರ್ನಿಥಿನ್ ಎಂಬ ಅಮೈನೋ ಆಮ್ಲದೊಡನೆ ಸೇರಿ ಕೊನೆಗೆ ಆರ್ಜಿನೀನ್ ಲಭಿಸುತ್ತದೆ. ಆಹಾರದ ಅಥವಾ ಹೊಸದಾಗಿ ಹೀಗೆ ಉತ್ಪಾದಿತವಾದ ಆರ್ಜನೀನ್  ವಿಶ್ಲೇಷಗೊಂಡು ಯೂರಿಯ ಮತ್ತು ಆರ್ನಿಥಿನ್ ಆಗುತ್ತವೆ. ಯೂರಿಯಾ ರಕ್ತಗತವಾಗಿ ಮುಂದೆ ಮೂತ್ರಪಿಂಡದಿಂದ ಮೂತ್ರರೂಪದಲ್ಲಿ ವಿಸರ್ಜಿತವಾಗುತ್ತದೆ. ಆರ್ನಿಥಿನ್ ಪುನಃ ಅಮೋನಿಯದೊಡನೆ ಸಂಯುಕ್ತವಾಗಿ ಆರ್ಜಿನೀನ್ ಆಗುತ್ತದೆ. ಹೀಗೆ ಚಕ್ರಾಕಾರವಾಗಿ ಪುನಃ ಪುನಃ ಅಮೋನಿಯದಿಂದ ಯೂರಿಯ ಉತ್ಪತ್ತಿಯಾಗಲು ಆರ್ಜಿನೀನ್ ಒಂದು ಘಟಕವಾಗಿರುವುದು ಅವಶ್ಯವಾಗಿದೆ. ಸಸ್ತನಿಗಳಲ್ಲಿ ಪ್ರೋಟೀನುಗಳ ಸಾರಜನಕ ವಿಸರ್ಜಿತವಾಗುವುದು ಹೀಗೆಯೇ- ಅಂದರೆ ಆರ್ಜಿನೀನ್ ಮೂಲಕ ಯೂರಿಯ ಆಗಿ. ಈ ರೀತಿಯ ತಯಾರಿಕೆಗೆ ಕ್ರೆಬ್ಸನ ಯೂರಿಯ ಚಕ್ರವೆಂದು ಹೆಸರು. (ನೋಡಿ - ಕ್ರೆಬ್ಸ್ ಯೂರಿಯ ಚಕ್ರ).

ದೇಹಕಾರ್ಯದಲ್ಲಿ  ಪ್ರಮುಖಪಾತ್ರವಹಿಸುವ ಎರಡನೆಯ ವಸ್ತು ಕ್ರಿಯಾಟಿನ್ (ಮೀಥೈಲ್ ಗ್ವಾನಿಡೋ ಅಸೆಟಿಕ್ ಆಮ್ಲ). ಇದು ಫಾಸ್ಫಾರಿಕ್ ಆಮ್ಲದೊಡನೆ ಸಂಯುಕ್ತವಾಗಿ ಕ್ರಿಯಾಟಿನ್ ಫಾಸ್ಫೇಟ್ ಅಥವಾ ಫಾಸ್ಫಜೆನ್ ಎಂಬ ವಸ್ತುವಾಗಿ ಕಶೇರುಕಗಳ ದೇಹದ ಐಚ್ಛಿಕ ಸ್ನಾಯುಗಳಲ್ಲಿ (ವಾಲಂಟರಿ ಮಸಲ್ಸ್) ಅಲ್ಪ ಮೊತ್ತದಲ್ಲಿ ಶೇಖರವಾಗಿರುತ್ತದೆ. ಈ ಮಾಂಸಖಂಡಗಳು ದೀರ್ಘಕಾಲ ಕೆಲಸಮಾಡಲು ಫಾಸ್ಫಜೆನ್ ಆವಶ್ಯಕ. ಸ್ನಾಯುಗಳ ಸಂಕೋಚಕ್ಕೆ ತತ್ಕ್ಷ್ಷಣವೇ ಬೇಕಾಗುವ ಶಕ್ತಿ ಅಡಿನೊಸಿನ್ ಟ್ರೈಫಾಸ್ಫೇಟ್ (ಎಟಿಪಿ) ಎಂಬ ವಸ್ತುವಿನ ಜಲವಿಶ್ಲೇಷಣೆಯಿಂದ ದೊರೆಯುತ್ತದೆ. ಮರುಕ್ಷಣದಲ್ಲೇ ಎಟಿಪಿ ಪುನಃ ಸಂಯೋಜಿತವಾಗಬೇಕು. ಹಾಗಾದರೆ ಮಾತ್ರ ಮಾಂಸಖಂಡದ ಸಂಕೋಚ ಮುಂದುವರಿಯಬಹುದಾಗಿದೆ. ಎಟಪಿಯ ಈ ಮರುಕ್ಷಣದ ಪುನಃ ಸಂಯೋಜನೆಗೆ ಕ್ರಿಯಾಟಿನ್ ಫಾಸ್ಫೇಟ್ ಅಗತ್ಯ. ಇದಾದ ಬಳಿಕ ಕ್ರಿಯಾಟಿನ್ ಉಳಿದುಕೊಳ್ಳುತ್ತದೆ. ಇದೇ ಕಾಲದಲ್ಲಿ ನಿಧಾನವಾಗಿ ಜರಗುವ ಗ್ಲೂಕೋಸಿನ ಉತ್ಕರ್ಷಣೆಯಿಂದ ಅಗಾಧ ಮೊತ್ತದಲ್ಲಿ ಎಟಿಪಿ ಉತ್ಪತ್ತಿಯಾಗುತ್ತದೆ. ಇದರಿಂದ  ಒದಗುವ ಶಕ್ತಿ ಕ್ರಿಯಾಟಿನನ್ನು ಪುನಃ ಕ್ರಿಯಾಟಿನ್ ಫಾಸ್ಫೇಟಾಗಿ ಪರಿವರ್ತಿಸುತ್ತದೆ. ಹೀಗೆ ಈ ವಸ್ತು ಪದೇ ಪದೇ ಪರಿವರ್ತನೆಯನ್ನು ತೋರಿಸುತ್ತ ಸ್ನಾಯುಗಳ ಕ್ರಿಯೆಗೆ ಅವಶ್ಯವಾಗಿದೆ. ಅಕಶೇರುಕಗಳಲ್ಲಿ ಕ್ರಿಯಾಟಿನ್ ಫಾಸ್ಫೇಟಿನ ಬದಲು ಆರ್ಜಿನೀನ್ ಫಾಸ್ಫೇಟ್ ಅಥವಾ ಫಾಸ್ಪೋಗ್ಲೂಕೋ ಸಯಾಮಿನ್ ರೀತಿಯ ಇನ್ನು ಬೇರೆ ಬೇರೆ ವಸ್ತುಗಳು ಪಾತ್ರವಹಿಸುವುವೆಂದು ತಿಳಿದಿದೆ. ಇಂಥ ವಸ್ತುಗಳಿಗೆಲ್ಲ ಫಾಸ್ಫಜೆನ್ಗಳೆಂದು ಸಾಮಾನ್ಯ ಹೆಸರನ್ನು ಕೊಟ್ಟಿದೆ. ಇವು ಗ್ವಾನಿಡೀನಿನ ಸಂಬಂಧಿಗಳೇ ಆಗಿವೆ.

	ಎಟಿಪಿ ಶಕ್ತಿ + ಎಡಿಪಿ
	ಫಾಸ್ಫೆಜೆನ್ + ಎಡಿಪಿ  ಎಟಿಪಿ+ ಕ್ರಿಯಾಟಿನ್
	ಗ್ಲೂಕೋಸ್ 
	ಎಟಿಪಿ
	ಎಡಿಪಿ     
	ಎಟಿಪಿ + ಕ್ರಿಯಾಟಿನ್  ಫಾಸ್ಫೆಜೆನ್ + ಎಡಿಪಿ
	ಕ್ರಿಯಾಟಿನ್ - ಕ್ರಿಯಾಟಿನ್ ್ಪ ಫಾಸ್ಫೇಟ್ ಪರಿವರ್ತನೆ

ಕ್ರಿಯಾಟಿನ್ನಿಂದ ಕ್ರಿಯಾಟಿನಿನ್ ಎಂಬ ವಸ್ತು ದೇಹದಲ್ಲಿ ಉತ್ಪತ್ತಿಯಾಗುತ್ತಿದ್ದು ಮೂತ್ರದಲ್ಲಿ ವಿಸರ್ಜಿತವಾಗುತ್ತದೆ. ಇದೂ ಗ್ವಾನಿಡೀನಿನ ಸಂಬಂಧಿಯೆಂಬುದು ವ್ಯಕ್ತ. ದೇಹದಲ್ಲಿ ಉತ್ಪತ್ತಿಯಾಗಿ ವಿಸರ್ಜಿತವಾಗುವ ಸಾರಜನಕ ಸಂಯುಕ್ತವಸ್ತು ಪ್ರಮುಖವಾಗಿ ಇದೊಂದೇ ಆದ್ದರಿಂದ ದೇಹಾಂತರ ಸಾರಜನಕ ಚಯಾಪಚಯದ (ಎಂಡಾಜಿನಸ್ ನೈಟ್ರೊಜನ್ ಮೆಟಬಾಲಿಸಿಮ್) ವೇಗನಿಷ್ಕರ್ಷೆಗೆ ಮೂತ್ರದಲ್ಲಿ ಕ್ರಿಯಾಟಿನಿನ ಮಟ್ಟವನ್ನು ನಿರ್ಧರಿಸಲಾಗುತ್ತದೆ. ಮೂತ್ರದಲ್ಲಿ ಸಾಮಾನ್ಯವಾಗಿ ವಯಸ್ಕರಲ್ಲಿ ಕ್ರಿಯಾಟಿನ್ ವಿಸರ್ಜಿತವಾಗುವುದಿಲ್ಲ. ಆದರೆ ಬಹು ಶೀಘ್ರವಾಗಿ ಬೆಳೆಯುತ್ತಿರುವ ಮಕ್ಕಳಲ್ಲಿ, ಬಾಣಂತಿಯರಲ್ಲಿ ಕ್ರಿಯಾಟಿನ್ ಮೂತ್ರದಲ್ಲಿ ಕಂಡುಬರುತ್ತದೆ. ಮಿಕ್ಕ ವೇಳೆ ಕಂಡುಬಂದರೆ ಆದು ದೇಹದಲ್ಲಿ ಸ್ನಾಯುಶಿಥಿಲತೆ ಇದೆ ಎಂದು ಸೂಚಿಸುತ್ತದೆ.	(ಪಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ